ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ದಿನಾಂಕ: 16.12.23 ರಂದು ಯಾದಗಿರಿ ನಗರದ ಭಾಗ ಸಂಖ್ಯೆ 51, 52, 53 & 54 ರ ಮತಗಟ್ಟೆಗಳಿಗೆ ಭೇಟಿ ನೀಡಿ Form- 6,7,8 ಗಳ ಪರಿಶೀಲನೆ ಮತ್ತು DSE, PSE ಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ದಿನಾಂಕ:13.12.23 ರಂದು ಗುರುಮಿಠಕಲ್ ತಾಲೂಕಿನ ಅನಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆಹಾರ ಪದಾರ್ಥಗಳು ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ದಿನಾಂಕ:13.12.23 ರಂದು ಗುರುಮಿಠಕಲ್ ತಾಲೂಕಿನ ಕಂದಕೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆಹಾರ ಪದಾರ್ಥಗಳು ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು
ದಿನಾಂಕ: 13.12.23 ರಂದು ಗುರಮಿಠಕಲ್ ತಾಲೂಕಿನ ದಂತಾಪೂರ ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ದಾಖಲೆಗಳು ಸರಿಯಾಗಿ ನಿರ್ವಹಿಸ ಬೇಕೆಂದು ಸೂಚಿಸಲಾಯಿತು.
ದಿನಾಂಕ:11.12.23 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ,ಸಭೆಯನ್ನು ನಡೆಸಲಾಯಿತು.
ದಿನಾಂಕ:06.12.2023 ರಂದು ಜಿಲ್ಲಾಧಿಕಾರಿಗಳು ಕನಾ೯ಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ( ವಿಮಾ) ಯೋಜನೆ ಅಡಿ,ಆಯ್ಕೆಯಾದ ಹುಣಸಗಿ ಪಟ್ಟಣದ ಹತ್ತಿ (ಮ.ಆ) ಬೆಳೆಯ ನಮೂನೆ-೨ ನ್ನು ಬೆಳೆ ಕಟಾವು ಪ್ರಯೋಗವನ್ನು ವಿಮಾ ಅಧಿಕಾರಿ, ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಂಬಂಧಿಸಿದ ರೈತರ ಉಪಸ್ಥಿತಿಯಲ್ಲಿ ಕೃಷಿ ಅಧಿಕಾರಿ ನಡೆಸಿದ ಪ್ರಯೋಗವನ್ನು ಪರಿಶೀಲಿಸಲಾಯಿತು.
ದಿನಾಂಕ 06.12.2023 ರಂದು ಜಿಲ್ಲಾಧಿಕಾರಿಗಳು ಹುಣಸಗಿ ತಾಲೂಕಿನ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅಡುಗೆ ಕೋಣೆ ವೀಕ್ಷಿಸಿ ಶಾಲೆಯಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಕು ಶಾಲೆಯಲ್ಲಿ ಮಕ್ಕಳಿಗೆ ಕುಡಿವ ನೀರು, ಶೌಚಾಲಯ, ತರಗತಿ ಕೊಠಡಿ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
ದಿನಾಂಕ : 06.12.2023 ರಂದು ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ತಾಲೂಕಿನ BLO ಮತ್ತು BLO ಮೇಲ್ವಿಚಾರಕರ ಸಭೆ ತೆಗೆದುಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಕುರಿತು ನಿರ್ದೇಶನ ನೀಡಿದರು.
ದಿನಾಂಕ : 06.12.2023 ರಂದು ಜಿಲ್ಲಾಧಿಕಾರಿಗಳು ಹುಣಸಗಿ ತಾಲೂಕಿನ BLO ಮತ್ತು BLO ಮೇಲ್ವಿಚಾರಕರ ಸಭೆ ತೆಗೆದುಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡುವ ಕುರಿತು ನಿರ್ದೇಶನ ನೀಡಿದರು.
ಇಂದು ಗೌರವಾನ್ವಿತ ಜಿಲ್ಲಾಧಿಕಾರಿ ಮೇಡಂ ಅವರ ಅಧ್ಯಕ್ಷತೆಯಲ್ಲಿ ಶೋರಾಪುರ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್, ಇಒ ತಾ.ಪಂ., ನಗರಸಭೆ ಮುಖ್ಯಾಧಿಕಾರಿ, ಎಲ್ಲಾ ಬಿಎಲ್ಒಗಳು ಮತ್ತು ಬಿಎಲ್ಒ ಮೇಲ್ವಿಚಾರಕರು, ಚುನಾವಣೆಗೆ ಸಂಬಂಧಿಸಿದ ಯುವ ಮತದಾರರ ನೋಂದಣಿ, ವಿಶೇಷ ಸಾರಾಂಶ ಪರಿಷ್ಕರಣೆ-2024 ಮತ್ತು ಇತರ ಚುನಾವಣಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.