ಮುಕ್ತಾಯ ಮಾಡು

ಕಂದಾಯ ಇಲಾಖೆ ಪ್ರಗತಿ

DCimage

ಡಾ. ಸುಶೀಲಾ ಬಿ ಭಾ.ಆ.ಸೇ

ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ವಿವಿಧ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ

ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ವಿವಿಧ ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ಜೂನ್ ಮಾಹೆಯಲ್ಲಿ ಅರ್ಜಿ ವಿಲೇವಾರಿ ಶೇ 82.54% ಇದ್ದು, ಕಳೆದ 6 ತಿಂಗಳಲ್ಲಿ ಸ್ವೀಕೃತವಾದ 4,01,139 ಅರ್ಜಿಗಳಲ್ಲಿ 3,34,889 ಅರ್ಜಿಗಳನ್ನು ಶೇಕಡಾವಾರು 83.48% ರಷ್ಟು ವಿಲೇಮಾಡಿ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದ್ದಾರೆ.

ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು ( ತಿದ್ದುಪಡಿ) ಅಧಿನಿಯಮ, 2014 ಕಾಯಿದೆಯಲ್ಲಿ ಇಂದಿಗೆ 100 ಕ್ಕೂ ಹೆಚ್ಚಿನ ಇಲಾಖೆಗಳ 1181 ಸೇವೆಗಳ ನಾಗರಿಕರಿಗೆ ಲಭ್ಯವಿರುತ್ತವೆ. ಹಾಲಿ ಸರ್ಕಾರವೂ ವಿವಿಧ ಹಂತಗಳಲ್ಲಿ ಹೊಸದಾದ ಸೇವೆಗಳನ್ನು ಸೇರ್ಪಡೆಗೊಳಿಸಿ ನಾಗರಿಕರಿಗೆ ಉತ್ತಮವಾದ ಸೌಲಭ್ಯವನ್ನು ನೀಡಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಂದಾಯ ಇಲಾಖೆಯಲ್ಲಿನ ಸಕಾಲ ಸೇವೆಗಳ ಪ್ರಗತಿ:

ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಜೂನ್ ಮಾಹೆಯಲ್ಲಿ ಅರ್ಜಿ ವಿಲೇವಾರಿ ಶೇಕಡವಾರು 79.72 ರಷ್ಟಿದ್ದು, ಕಳೆದ 6 ತಿಂಗಳಲ್ಲಿ 2,61,303 ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ 2,61,724 ಅರ್ಜಿಗಳನ್ನು ವಿಲೇಮಾಡಿ ಶೇಕಡಾವಾರು 100% ಸಾಧನೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳು 3 ನೇ ಶ್ರೇಯಾಂಕದಲ್ಲಿದ್ದರೆ ಅಗಸ್ಟ್ ಮತ್ತು ಅಕ್ಟೋಬರ್ ತಿಂಗಳು ಶೇಯಾಂಕ 2 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಟಲ್ ಜೀ ಜನಸ್ನೇಹಿ ಕೇಂದ್ರದ ಪ್ರಗತಿ ವರದಿ (AJSK):

ಯಾದಗಿರಿ ಜಿಲ್ಲೆಯಲ್ಲಿ ಬರುವ 06 ತಾಲ್ಲೂಕಗಳಲ್ಲಿರುವ ನಾಡಕಛೇರಿಯ ಅಟಲಜೀ ಜನಸ್ನೇಹಿ ಕೇಂದ್ರದಲ್ಲಿ ಸಲ್ಲಿಸಿರುವ ಅರ್ಜಿಗಳ 371 (ಜೆ), ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ವಿವಿಧ ಪಿಂಚಣಿಗಳ ಅರ್ಜಿಗಳನ್ನು 6 ತಿಂಗಳ ಪ್ರಗತಿಯು ಕಳೆದ 06 ತಿಂಗಳಲ್ಲಿ ಒಟ್ಟು-252321 ಅರ್ಜಿಗಳಲ್ಲಿ ಸ್ವೀಕೃತವಾಗಿದ್ದು, ಇದರ ಪೈಕಿ ಒಟ್ಟು-243864 ಅರ್ಜಿಗಳನ್ನು ವಿಲೇಯಾಗಿದ್ದು, ಹಿಂದಿನ ಆರು ತಿಂಗಳಲ್ಲಿ ಶೇಕಡವಾರು ಒಟ್ಟು 96.65% ಸರಾಸರಿ ಪ್ರಗತಿ ಸಾಧಿಸಲಾಗಿರುತ್ತದೆ.

ಈ ಮೇಲೆ ತೋರಿಸಿದ ಪ್ರಕಾರ ಅಟಲ್ ಜೀ ಜನಸ್ನೇಹಿ ಕೇಂದ್ರದ 42 ಸೇವೆಗಳನ್ನು NK-4 ರಿಂದ 22 ಸೇವೆಗಳನ್ನು NK-5 ವರ್ಗಾವಣೆ ಮಾಡಲಾಗಿದೆ ಹಾಗೂ NK-5 ಯಲ್ಲಿ ಅರ್ಜಿದಾರರಿಗೆ ಅರ್ಜಿ ಹಾಕಿದನಂತರ ಅರ್ಜಿ ಸ್ಥಿತಿಗತಿಯನ್ನು ಹೋಗುವ ವ್ಯವಸ್ಥೆ ಅಥವಾ ಮಾಹಿತಿ (SMS) ಮೂಲಕ ನೀಡಲಾಗುವುದು ಮತ್ತು NK-5 ಯಲ್ಲಿ ನಾಡ ಕಛೇರಿ ಅರ್ಜಿಗಳನ್ನು ಶೇಕಡ 86% ರಷ್ಟು ಅರ್ಜಿಗಳನ್ನು ಹಾಕಲು ವ್ಯವಸ್ಥೆ ಇರುತ್ತದೆ ಹಾಗೂ NK-5 ಯಲ್ಲಿ ಡಿಜಿಟಲ್ ಪೆಮೇಂಟ್ (Phone pe) ಮುಖಾಂತರ ಸರ್ಕಾರ ನಿಗಧಿಪಡಿಸಿದ ರಂತೆ ಪಾವತಿಸುವ ವ್ಯವಸ್ಥೆ ಇರುತ್ತದೆ.

Mutations (ವರ್ಗಾವಣೆಗಳು/ಹಕ್ಕು ಬದಲಾವಣೆ):

ಕರ್ನಾಟಕ ಸರ್ಕಾರವು ಕರ್ನಾಟಕ ಭೂಕಂದಾಯ ನಿಯಮಗಳು 1996 ಕ್ಕೆ ತಿದ್ದುಪಡಿ ತಂದು ಕೃಷಿ ಜಮೀನಿಗೆ ಸಂಬಂಧಿಸಿದಂತೆ ವರ್ಗಾವಣೆ ಕೈಗೊಳ್ಳುವಾಗ ವರ್ಗಾವಣೆಗಳ ಮುದ್ದತ್ತು (ಆಕ್ಷೇಪಣೆ ಸ್ವೀಕರಿಸು/ನೋಟಿಸು) ಅವಧಿಯನ್ನು ಈ ಹಿಂದೆ ಇದ್ದ (30) ದಿವಸಗಳ ಕಾಲವಧಿಯಿಂದ. ನೋಂದಾಯಿತ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ (07) ದಿವಸಗಳ ಕಾಲವಧಿ ಹಾಗೂ ನೋಂದಾಯಿತ ವಲ್ಲದ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ (15) ದಿವಸಗಳ ಕಾಲವಧಿಯನ್ನು ನಿಗದಿಪಡಿಸಿರುತ್ತಾರೆ.

ನೋಂದಾಯಿತ (ಕ್ರಯ, ವಿಭಾಗ, ದಾನಪತ್ರ, ಹಕ್ಕು ಬಿಡುಗಡೆ ಪತ್ರ)

ಅದರಂತೆ ಮೇ-2023 ರ ಮಾಹೆಯಿಂದ ನವೆಂಬರ್-2023 ರ ಮಾಹೆಯ ವರೆಗೆ ನೋಂದಾಯಿತ ದಾಖಲೆಯ ಆಧಾರದ ಮೇಲೆ ಒಟ್ಟು-6066 ವರ್ಗಾವಣೆ ಅರ್ಜಿಗಳು ಸ್ವೀಕೃತವಾಗಿದ್ದು ಇದರ ಪೈಕಿ-5836 ವರ್ಗಾವಣೆ ಅರ್ಜಿಗಳು ಈ ಹಿಂದೆ 06 ತಿಂಗಳ ಕಾಲವಧಿಯಲ್ಲಿ ವಿಲೇಗೊಳಿಸಿ ಪ್ರಗತಿ ಸಾಧಿಸಲಾಗಿರುತ್ತದೆ ಮೇ-2023 ನ ಮಾಹೆಯಲ್ಲಿ ಸರಾಸರಿ ವಿಲೇವಾರಿ ದಿನಗಳು 31 ಇದ್ದು ಹಿಂದಿನ ತಿಂಗಳ ಕಾಲವಧಿಯಲ್ಲಿ ಸರಾಸರಿ ವಿಲೇವಾರಿ ದಿನಗಳ 17.16 ಸಾಧಿಸಲಾಗಿರುತ್ತದೆ

ನೋಂದಾಯಿತವಲ್ಲದ (ಪೌತಿ):

ಅದರಂತೆ ಮೇ-2023 ರ ಮಾಹೆಯಿಂದ ನವೆಂಬರ್-2023 ರ ಮಾಹೆಯ ವರೆಗೆ ನೋಂದಾಯಿತವಲ್ಲದ ದಾಖಲೆಯ ಆಧಾರದ (ಪೌತಿ) ಮೇಲೆ ಒಟ್ಟು-4597 ವರ್ಗಾವಣೆ ಅರ್ಜಿಗಳು ಸ್ವೀಕೃತವಾಗಿದ್ದು ಇದರ ಪೈಕಿ-4235 ವರ್ಗಾವಣೆ ಅರ್ಜಿಗಳು ಈ ಹಿಂದೆ 06 ತಿಂಗಳ ಕಾಲವಧಿಯಲ್ಲಿ ವಿಲೇಗೊಳಿಸಿ ಪ್ರಗತಿ ಸಾಧಿಸಲಾಗಿರುತ್ತದೆ. ಮೇ-2023 ನ ಮಾಹೆಯಲ್ಲಿ ಸರಾಸರಿ ವಿಲೇವಾರಿ ದಿನಗಳು 46 ಇದ್ದು ಹಿಂದಿನ ತಿಂಗಳ ಕಾಲವಧಿಯಲ್ಲಿ ಸರಾಸರಿ ವಿಲೇವಾರಿ ದಿನಗಳ 13.08 ಸಾಧಿಸಲಾಗಿರುತ್ತದೆ.

Without Notice (ನೋಟಿಸು ರಹಿತ ವರ್ಗಾವಣೆಗಳ ವಿವರ)

ಅದರಂತೆ ಮೇ-2023ರ ಮಾಹೆಯಿಂದ ನವೆಂಬರ್-2023 ರ ಮಾಹೆಯವರೆಗೆ ಒಟ್ಟು-20358 ವರ್ಗಾವಣೆ ಅರ್ಜಿಗಳು ಸ್ವೀಕೃತವಾಗಿದ್ದು, ಇದರ ಪೈಕಿ-20272 ವರ್ಗಾವಣೆ ಅರ್ಜಿಗಳು ಈ ಹಿಂದೆ 06 ತಿಂಗಳ ಕಾಲವಧಿಯಲ್ಲಿ ವಿಲೇಗೊಳಿಸಿ ಪ್ರಗತಿ ಸಾಧಿಸಲಾಗಿರುತ್ತದೆ.

ಮೇ-2023 ನ ಮಾಹೆಯಲ್ಲಿ ಸರಾಸರಿ ವಿಲೇವಾರಿ ದಿನಗಳು 6.98 ಇದ್ದು ಹಿಂದನ 06 ತಿಂಗಳ ಕಾಲವಧಿಯಲ್ಲಿ ಸರಾಸರಿ ವಿಲೇವಾರಿ ದಿನಗಳು 1.37 ಕ್ಕೆ ಪ್ರಗತಿ ಸಾಧಿಸಲಾಗಿರುತ್ತದೆ.

ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳ ವಿಲೇವಾರಿ ಮಾಹಿತಿ:

ಯಾದಗಿರಿ ಜಿಲ್ಲೆಯಡಿಯಲ್ಲಿ ಬರುವ ವಿವಿಧ ತಾಲೂಕುಗಳ ತಹಶೀಲ್ದಾರರ (ಆರ್.ಆ‌ರ್.ಟಿ) ನ್ಯಾಯಾಲಯಗಳಲ್ಲಿ ದಿನಾಂಕ:31.05.2023 ರಂದು ಒಟ್ಟು-669 ತಕರಾರು ಪ್ರಕರಣಗಳು ಬಾಕಿ ಇದ್ದು, ಹಿಂದಿನ ಆರು ತಿಂಗಳ ಅವಧಿಯಲ್ಲಿ 552 ಪ್ರಕರಣಗಳು ಸ್ವೀಕೃತಿಯಾಗಿದ್ದು, ಒಟ್ಟು ಸ್ವೀಕೃತಿ ಪ್ರಕರಣಗಳು 1221 ಇದ್ದು ಇಲ್ಲಿಯವರೆಗೆ 896 ಪ್ರಕರಣಗಳನ್ನು ವಿಲೇಗೊಳಿಸಿ ಪ್ರಗತಿ ಸಾಧಿಸಲಾಗಿರುತ್ತದೆ.

01 ವರ್ಷದಿಂದ 05 ವರ್ಷ ಮೇಲ್ಪಟ್ಟು ಒಟ್ಟು-171 ಪ್ರಕರಣಗಳು ವಿಚಾರಣೆಗಾಗಿ ಬಾಕಿ ಇದ್ದು. ಇದರ ಪೈಕಿ ಪೂರ್ಣತ: 110 ಪ್ರಕರಣಗಳು ಹಿಂದಿನ 06 ತಿಂಗಳಿನ ಅವಧಿಯಲ್ಲಿ ವಿಲೇಗೊಳಿಸಿ ಪ್ರಗತಿ ಸಾಧಿಸಿದ್ದು, ಸದರಿ ಅವಧಿಯಲ್ಲಿ 61 ಪ್ರಕರಣಗಳು ವಿಲೇವಾರಿಗಾಗಿ ಬಾಕಿ ಇರುತ್ತವೆ.

ಪಹಣಿ ಕಾಲಂ (03) ಮತ್ತು (09) ಬಿನ್ನತೆಗಳನ್ನು ಸರಿಪಡಿಸಿರುವ ವಿವರ:

(RTC Col 389 Mismatch disposal Details)

ಯಾದಗಿರಿ ಜಿಲ್ಲೆಯಡಿಯಲ್ಲಿ ಬರುವ ವಿವಿಧ ತಾಲೂಕುಗಳ ತಹಶೀಲ್ದಾರ ಕಛೇರಿಗಳಲ್ಲಿ ಮೇ-2023 ರ ಮಾಹೆಯಿಂದ ನವೆಂಬರ್-2023 ರ ಮಾಹೆಯ ವರೆಗೆ ಒಟ್ಟು-3140 ಪ್ರಕರಣಗಳು ಬಾಕಿ ಇದ್ದು ಹಿಂದಿನ 6 ತಿಂಗಳಿನ ಅವಧಿಯಲ್ಲಿ 2346 ಪಹಣಿ ಕಾಲಂ (3) ಮತ್ತು (9) ಬಿನ್ನತೆಗಳ ( RTC col 3&9 mismatch) ಪ್ರಕರಣಗಳು ವಿಲೇಯಾಗಿದ್ದು, ಹಿಂದಿನ 06 ತಿಂಗಳಿನ ಅವಧಿಯಲ್ಲಿ 74.71% ಪ್ರಗತಿ ಸಾಧಿಸಲಾಗಿರುತ್ತದೆ.

ಮೋಜಣಿ ಪಹಣಿಗಳ ತಿದ್ದುಪಡಿ ವಿವರ (Mojini RTC correction disposal Details):

ಯಾದಗಿರಿ ಜಿಲ್ಲೆಯಡಿಯಲ್ಲಿ ಬರುವ ವಿವಿಧ ತಾಲೂಕುಗಳ ತಹಶೀಲ್ದಾರ ಕಛೇರಿಗಳಲ್ಲಿ ಮೇ-2023 ರ ಮಾಹೆಯಿಂದ ನವೆಂಬರ್-2023 ರ ಮಾಹೆಯ ವರೆಗೆ ಒಟ್ಟು-6620 ಪ್ರಕರಣಗಳು ಬಾಕಿ ಇದ್ದು, ಹಿಂದಿನ 06 ತಿಂಗಳಿನ ಅವಧಿಯಲ್ಲಿ-4774 ಪಹಣಿ ತಿದ್ದುಪಡಿ ಪ್ರಕರಣಗಳು ವಿಲೇಯಾಗಿದ್ದು, ಹಿಂದಿನ 06 ತಿಂಗಳಿನ ಅವಧಿಯಲ್ಲಿ 72% ಪ್ರಗತಿ ಸಾಧಿಸಲಾಗಿರುತ್ತದೆ.

ಸರ್ಕಾರಿ ಮತ್ತು ಪಿ.ಟಿ.ಸಿ.ಎಲ್. ಜಮೀನುಗಳ ಫ್ಲ್ಯಾಗ್ ಮಾಡಿರುವ ವಿವರ:

ಯಾದಗಿರಿ ಜಿಲ್ಲೆಯಡಿಯಲ್ಲಿ ಬರುವ ವಿವಿಧ ತಾಲುಕುಗಳ ತಹಸೀಲ್ದಾರ ಕಛೇರಿಗಳಲ್ಲಿ ಸೆಪ್ಟೆಂಬರ್ ಮಾಹೆಯ 17ನೇ ದಿನಾಂಕದಿಂದ ನವೆಂಬರ್-2023 ರ ಮಾಹೆಯ ವರೆಗೆ ಒಟ್ಟು-3114 ಪಿಟಿಸಿಎಲ್ ಜಮೀನುಗಳ ಹಾಗೂ 1460 ಸರ್ಕಾರಿ ಜಮೀನುಗಳ ಫ್ಲ್ಯಾಗಿಂಗ ಮಾಡಲಾಗಿರುತ್ತದೆ.

ಇ-ಆಪೀಸ್ (ಕಂದಾಯ ಇಲಾಖೆ) ಪ್ರಗತಿ ವಿವರ:

ಯಾದಗಿರಿ ಜಿಲ್ಲೆಯಡಿಯಲ್ಲಿ ಬರುವ ಜಿಲ್ಲಾಧಿಕಾರಿಗಳ ಕಛೇರಿ, ಸಹಾಯಕ ಕಛೇರಿ ಹಾಗೂ ಜಿಲ್ಲೆಯ ಎಲ್ಲಾ (06) ತಾಲೂಕು ಕಛೇರಿಗಳಲ್ಲಿ ಈಗಾಗಲೇ ಇ-ಆಫೀಸ್ ಅಳವಡಿಸಿದ್ದು, ಇಂದಿನ ವರೆಗೆ ಒಟ್ಟು-24174 ಕಡತಗಳು ಇ- ಆಫೀಸ್ ಮೂಲಕ ನಿರ್ವಹಿಸಿದ್ದು, ಇದರ ಪೈಕಿ-19316 ಕಡತಗಳನ್ನು ವಿಲೇಯಾಗಿದ್ದು ಹಿಂದಿನ 06 ತಿಂಗಳಿನ ಅವಧಿಯಲ್ಲಿ 79.90% ಪ್ರಗತಿ ಸಾಧಿಸಲಾಗಿರುತ್ತದೆ.

ಕಂದಾಯ ಗ್ರಾಮ:

ಯಾದಗಿರಿ ಜಿಲ್ಲೆಯಲ್ಲಿ ದಾಖಲೆ ರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಒಟ್ಟು 93 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿರುತ್ತದೆ. ಅದರಲ್ಲಿ ಮೇ-2023 ರ ಅಂತ್ಯಕ್ಕೆ ಪ್ರಾಥಮಿಕ ಅಧಿಸೂಚನೆ-85 ಹಾಗೂ ಅಂತಿಮ ಅಧಿಸೂಚನೆ-61 ಹೊರಡಿಸಲಾಗಿದ್ದು, ಅದರಲ್ಲಿ ಮೇ-2023 ರ ಅಂತ್ಯಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಯಾವುದು ಬಾಕಿ ಇರುವುದಿಲ್ಲ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಲು ಒಟ್ಟು-24 ಪ್ರಕರಣಗಳು ಬಾಕಿ ಇದ್ದು ಇದರ ಪೈಕಿ ನವೆಂಬರ್-2023 ರ ಅಂತ್ಯಕ್ಕೆ ಅಂತಿಮ ಅಧಿಸೂಚನೆಗಾಗಿ-19 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಹಾಗೂ 05 ಗ್ರಾಮಗಳಿಗೆ ಸಾರ್ವಜನಿಕರಿಂದ ತಕರಾರು ಅರ್ಜಿ ಸ್ವೀಕೃತಿಯಾಗಿದ್ದು. ವಿಚಾರಣೆ ಹಂತದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.