ಏವೂರು
ಏವೂರು ಗ್ರಾಮವು ಸುರಪೂರದಿಂದ ಈಶಾನ್ಯ ದಿಕ್ಕಿಗೆ 32ಕಿ.ಮೀ.ದೂರದಲ್ಲಿದೆ. 11 ರಿಂದ 12 ನೇ ಶತಮಾನದಲ್ಲಿ ಈ ಭಾಗವನ್ನು ಆಳಿದ ಕಲ್ಯಾಣಿ ಚಾಲುಕ್ಯರ 2 ಮತ್ತು ಕಳಚೂರಿ ಅರಸರ 2 ಶಾಸನಗಳು ಅಲ್ಲದೇ ಇನ್ನು ಅನೇಕ ಶಾಸನಗಳು ಲಭಿಸಿವೆ.ಎಲ್ಲಾ ಸುಸ್ಥಿತಿಯಲ್ಲಿರುವುದು ವಿಶೇಷ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕøತಿಕ ಸಮೃದ್ಧ ಕೇಂದ್ರವಾಗಿತ್ತು. ಇಂದಿಗೂ ಕಣ್ಮನಸೆಳೆಯುವ ಚಿತ್ತಾಕರ್ಷಕ ಶಿಲ್ಪಕಲೆ, ಸ್ಥಂಭಾಕಾರದ ಶಾಸನಗಳು,ಬಹುಕೋನಗಳಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪಗಳುಳ್ಳ,ಮಂದಿರಗಳು, ಬಸದಿಗಳು, ಮೂರ್ತಿಗಳು ಒಳಗೊಂಡ ಸೋಮೇಶ್ವರ- ಸಂಗಮೇಶ್ವರ ದೇವಸ್ಥಾನಗಳು, ಶಿವ ಪಾರ್ವತಿಯರ,ವಿಷ್ಣು, ಗರುಡ, ಸರ್ಪ ಸೇರಿದಂತೆ ವೈವಿಧ್ಯಮಯ ದೇವತೆಗಳಮೂರ್ತಿಗಳು, ನೋಡಿದಷ್ಟು ನೋಡುತ್ತಲೇ ಇರಬೇಕೆಂಬ ಮನದಣಿಯದ,ಕಣ್ಮನ ಸೆಳೆಯುವ ಅಪೂರ್ವ ಶಿಲ್ಪಕಲೆಯ ತವರೂರು ಏವೂರು.
ಫೋಟೋ ಗ್ಯಾಲರಿ
ತಲುಪುವ ಬಗೆ
ವಿಮಾನದಲ್ಲಿ
ಇಲ್ಲ
ರೈಲಿನಿಂದ
ಇಲ್ಲ
ರಸ್ತೆ ಮೂಲಕ
ಸುರಪುರದ ಈಶಾನ್ಯಕ್ಕೆ 32 ಕಿಮೀ ದೂರದಲ್ಲಿದೆ.