ಮುಕ್ತಾಯ ಮಾಡು

ಗ್ರಾಮಒನ್

ಗ್ರಾಮಒನ್ ಬಗೆಗಿನ ಪರಿಚಯ

ಗ್ರಾಮಒನ್ ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಏಕ ಸಹಾಯಕ ಕೇಂದ್ರ ವ್ಯವಸ್ಥೆ ಎಂಬುದಾಗಿ ಊಹಿಸಬಹುದಾಗಿದೆ. ಎಂದರೆ ಇದರಲ್ಲಿ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಐ. ಪ್ರಶ್ನೆಗಳು ಇತ್ಯಾದಿಗಳು ಒಳಗೊಂಡಿರುತ್ತವೆ. 2020-21 ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಘೋಷಿಸಿರುತ್ತಾರೆ. ವಾರದ ಎಲ್ಲಾ ಏಳು (7) ದಿನಗಳಲ್ಲೂ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಗ್ರಾಮಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಗ್ರಾಮಒನ್ ಕೇಂದ್ರಗಳ ಊಹಿಸಬಹುದಾದ ಲಾಭಗಳೆಂದರೆ

  • ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
  • ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
  • ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
  • ಗ್ರಾಮಒನ್ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.

ಭೇಟಿ: https://www.karnatakaone.gov.in/Public/GramOneFranchiseeTerms