ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿಯಲ್ಲಿ ಆಯ್ಕೆಯಾದ ಯಾದಗಿರಿ ಜಿಲ್ಲೆಗೆ ಕೇಂದ್ರದ ನೀತಿ ಆಯೋಗದ ಅಧಿಕಾರಿಗಳು ದಿನಾಂಕ 16.7.2022 ರಂದು ಶಹಾಪೂರ ತಾಲೂಕಿನ ದೋರನಹಳ್ಳಿ ಎಮ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ ಈ ಸಂಸ್ಥೆಯಲ್ಲಿನ ಮುರ್ರಾ ತಳಿಯ ಎಮ್ಮೆಗಳ ನಿರ್ವಹಣೆ ಬಗ್ಗೆ, ಮೇವಿನ ಬೆಳೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.