ಮಹತ್ವಾಕಾಂಕ್ಷಿ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ
ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ, ಜಿಲ್ಲಾಡಳಿತ ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್, ಯಾದಗಿರಿ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗಮೇಳದ ಉದ್ಘಾಟಸಿ ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಲಾಯಿತು.
ದಿನಾಂಕ 20.12.2021 ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ಮೂರನೇ ಕೋವಿಡ್ ಅಲೆ ತಡೆಗಟ್ಟುವ ಬಗ್ಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ರೂಪಾಂತರಿ ವೈರಸ್ ತಡೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿರುವ ಎಲ್ಲಾ ಶುಶ್ರೂಷ ಸಿಬ್ಬಂದಿ, ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ದಿನಾಂಕ 17.10.2021 ರಂದು ಯಾದಗಿರಿ ತಾಲೂಕಿನ ಯರಗೋಳ ಚೆಕ್ ಪೋಸ್ಟ್ಗ ಗೆ ಭೇಟಿ ನೀಡಿದ ಬಗ್ಗೆ
ದಿನಾಂಕ 16.12.2021 ರಂದು ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ
ದಿನಾಂಕ 13.12.2021 ರಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು.
ಕರ್ನಾಟಕ ವಿಧಾನ ಪರಿಷತ್ತಿನ (ಸ್ಥಳೀಯ ಸಂಸ್ಥೆಗಳು) ಚುನಾವಣೆ-2021ರಪ್ರಯುಕ್ತ ಯಾದಗಿರಿ ನಗರ ಸಭೆ ಕಾರ್ಯಾಲಯ, ತಾಲೂಕಿನ ಮುಂಡರಗಿ, ರಾಮಸಮುದ್ರ, ಬಳಿಚಕ್ರ ಮತಗಟ್ಟೆಗಳಿಗೆ ಬೇಟಿ ಮತದಾನ ಪ್ರಕ್ರಿಯೆ ಪರಿಶೀಲಿಸಲಾಯಿತು
ಕರ್ನಾಟಕ ವಿಧಾನ ಪರಿಷತ್ತಿನ (ಸ್ಥಳೀಯ ಸಂಸ್ಥೆಗಳು) ಚುನಾವಣೆ-2021ರಪ್ರಯುಕ್ತ ಯಾದಗಿರಿ ತಾಲೂಕು ಕಚೇರಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳ ಅನ್ವಯ ಮತದಾನವು ಸಂಪೂರ್ಣ ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಯಿತು.
ದಿನಾಂಕ 08.12.2021 ರಂದು ಜಿಲ್ಲಾಧಿಕಾರಿಗಳು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ತಪಾಸಣೆಗಾಗಿ ಚೆಕ್ ಪೋಸ್ಟ್ ಗಳಲ್ಲಿ ಕಂಟೇನರ್ ಗಳನ್ನು ಸ್ಥಾಪಿಸಲಾಗಿದ್ದು, ಕಂಟೇನರ್ ಒಳಗೆ ಬಿಸಿಲಿನ ತಾಪವಾಗದಂತೆ ಒಳಗಡೆ ಪ್ಲೈವುಡ್ ನಿಂದ ಲ್ಯಾಮಿನೇಟ್ ಮಾಡಲಾದ್ದು. ವ್ಯವಸ್ಥಿತವಾಗಿ ವಿದ್ಯುತ್ ಸಾಧನೆಗಳಾದ ಫ್ಯಾನ್ ಮತ್ತು ಟ್ಯೂಬ್ ಲೈಟ್ ಗಳನ್ನು ಅಳವಡಿಸಿಲಾಗಿದೆ, ಎಂದು ತಿಳಿಸಿದರು.
ಮಹಾಪರಿನಿರ್ವಾಣ ದಿನ”ದ ಹಿನ್ನೆಲೆಯಲ್ಲಿ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ ನಮನಗಳನ್ನು ಸಲ್ಲಿಸಲಾಯಿತು.