ದಿನಾಂಕ 08.12.2021 ರಂದು ಜಿಲ್ಲಾಧಿಕಾರಿಗಳು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ತಪಾಸಣೆಗಾಗಿ ಚೆಕ್ ಪೋಸ್ಟ್ ಗಳಲ್ಲಿ ಕಂಟೇನರ್ ಗಳನ್ನು ಸ್ಥಾಪಿಸಲಾಗಿದ್ದು, ಕಂಟೇನರ್ ಒಳಗೆ ಬಿಸಿಲಿನ ತಾಪವಾಗದಂತೆ ಒಳಗಡೆ ಪ್ಲೈವುಡ್ ನಿಂದ ಲ್ಯಾಮಿನೇಟ್ ಮಾಡಲಾದ್ದು. ವ್ಯವಸ್ಥಿತವಾಗಿ ವಿದ್ಯುತ್ ಸಾಧನೆಗಳಾದ ಫ್ಯಾನ್ ಮತ್ತು ಟ್ಯೂಬ್ ಲೈಟ್ ಗಳನ್ನು ಅಳವಡಿಸಿಲಾಗಿದೆ, ಎಂದು ತಿಳಿಸಿದರು.
ಮಹಾಪರಿನಿರ್ವಾಣ ದಿನ”ದ ಹಿನ್ನೆಲೆಯಲ್ಲಿ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ ನಮನಗಳನ್ನು ಸಲ್ಲಿಸಲಾಯಿತು.
ದಿನಾಂಕ 05.12.2021 ರಂದು ಜಿಲ್ಲಾಧಿಕಾರಿಗಳು ಯಾದಗಿರಿ ತಾಲೂಕಿನ ಅರಿಕೇರಾ ಬಿ ತಾಂಡ, ಚಾಮನಾಳ, ಯಾದಗಿರಿ ನಗರದ ಮುಸ್ಲಿಂಪೂರ ಮತ್ತು ಅಂಬೇಡ್ಕರ್ ನಗರದ ಬೂತ್ ಗಳಿಗೆ ಭೇಟಿ ನೀಡಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2022 ರ ಸಂಬಂಧವಾಗಿ ಚುನಾವಣೆಗೆ ಸಂಬಂಧಿಸಿದಂತೆ ನಮೂನೆ-6, 6ಎ, 7, 8 ಮತ್ತು 8ಎ ಸಲ್ಲಿಕೆಯಾದ ಅರ್ಜಿಗಳ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಇನ್ನಿತರರು ಉಪಸ್ಥಿತರಿದ್ದರು.
ದಿನಾಂಕ 03.12.2021 ರಂದು ಕೃಷಿ ಮಹಾವಿದ್ಯಾಲಯ ಆಡಿಟೋರಿಯಂ ಸಭಾಂಗಣ ಭೀ- ಗುಡಿಯಲ್ಲಿ ಶಹಾಪುರ ಮತ್ತು ವಡಿಗೇರಾ ತಾಲೂಕಿನ ಲಸಿಕಾಕರಣ ಪ್ರಗತಿ ಪರಿಶೀಲನಾ ಸಭೆಯುನ್ನು ನಡೆಸಿದರು ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ದಿನಾಂಕ 30.11.21 ರಂದು ಜಿಲ್ಲಾಧಿಕಾರಿಗಳು ಸುರಪುರ ತಾಲೂಕಿನ ಶಾಖಾಪುರ ( ಎಸ್.ಎಚ್), ಹಲಗೇರಾ, ಕರ್ನಾಳ, ಚಂದಲಾಪುರೆ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ನಿರಾಕರಿಸಿದ ಗ್ರಾಮಸ್ಥರ ಮನೆಗೆ ತೆರಳಿ ಲಸಿಕೆಯ ಮಹತ್ವತೆ ತಿಳಿಸಿ ಜನರ ಮನವಲಿಸೀ ಲಸಿಕೆ ಹಾಕಿಸಲಾಯಿತು.
ದಿನಾಂಕ 26.11.2021 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ “ಸಂವಿಧಾನ ದಿನ” ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ದಿನಾಂಕ 25.11.2021 ರಂದು ಜಿಲ್ಲಾಧಿಕಾರಿಗಳು ವಡಗೇರಾ ತಾಲೂಕಿನ ನಾಯ್ಕ ಲ್ ಹಾಗೂ ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಭತ್ತ ಖರೀದಿ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು
ದಿನಾಂಕ 23.11.2021 ರಂದು ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ -2022 ರ ಸಂಬಂಧ ವಿಶೇಷ ನೋಂದಣೀ ಕಾರ್ಯಕ್ರಮದ ಅಂಗವಾಗಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
ದಿನಾಂಕ 23.10.2021ರಂದು ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಲಸಿಕಾಕರಣಕ್ಕಾಗಿ ನೂತನ ವೋಲ್ವೋ ಬಸ್ ಗೆ ಚಾಲನೆ ನೀಡಿದರು
ದಿನಾಂಕ 20.11.2021 ರಂದು ಜಿಲ್ಲಾಧಿಕಾರಿಗಳು ಯಾದಗಿರಿ ನಗರದ ವಿವಿಧ ವಾರ್ಡಗಳಿಗೆಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು, ಮಾತಾಮಾಣಿಕೇಶ್ವರಿ ನಗರದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ನೀರಿನ ಪಿಎಚ್ ಮತ್ತು ಕ್ಲೋರಿನ್ ಹಾಗೂ ಟರ್ಬುಡಿಟಿ ಟೆಸ್ಟ್ ಮಾಡಿಸಿ ಪರಿಶೀಲಿಸಿದರು