ಮುಕ್ತಾಯ ಮಾಡು

ಪ್ರವಾಸಿ ಪ್ಯಾಕೇಜುಗಳು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ KARNATAKA TOURISM One Stea Many Worlds

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವನ್ನು (ಕರಾಪ್ರಅನಿ) ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿರುವ ಒಂದು ಕಂಪನಿಯಾಗಿ 06.02.1971 ರಂದು ಸ್ಥಾಪಿಸಲಾಯಿತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ವಸತಿ ಸೌಲಭ್ಯ ಹಾಗೂ ಸಾರಿಗೆ ಅನುಕೂಲತೆಗಳನ್ನು ಒದಗಿಸುತ್ತದೆ. ವಸತಿ ಸೌಲಭ್ಯ, ಊಟೋಪಚಾರಗಳು ಹಾಗೂ ದೋಣಿವಿಹಾರ ಅನುಕೂಲತೆಗಳನ್ನು ಒದಗಿಸುವ ಉದ್ದೇಶದಿಂದ ನಿಗಮವು ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ  18 ಮಯೂರ ಸರಣಿಯ ಹೋಟೆಲುಗಳನ್ನು 5 ಉಪಾಹಾರಗೃಹಗಳನ್ನು ಹಾಗೂ 2 ದೋಣಿ ವಿಹಾರ ಕೇಂದ್ರಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಪ್ರವಾಸಗಳು ಹಾಗೂ ಪ್ಯಾಕೇಜುಗಳನ್ನು, ಮೃಗಾಯವಿಹಾರ (ಸಫಾರಿ) ಸೇವೆಗಳು ಹಾಗೂ ಪೂರ್ವಭಾವಿಯಾಗಿ ಪಾವತಿಸಲ್ಪಡುವ (ಪ್ರೀಪೈಡ್) ಟ್ಯಾಕ್ಸಿ ಸೇವೆಗಳನ್ನು, ತನ್ನದೇ ಸ್ವಾಮ್ಯದಲ್ಲಿರುವಂತಹ ಸುಖವಿಲಾಸಿ/ಆರಾಮದಾಯಕ ಬಸ್ಸುಗಳು, ಮಿನಿ ಬಸ್ಸುಗಳು ಹಾಗೂ ಓಲ್ವೋ ಬಸ್ಸುಗಳನ್ನು ಒಳಗೊಂಡಂತೆ 52 ವಾಹನಗಳ ಜೊತೆಯಲ್ಲಿ ಕಾರ್ಯಾಚರಣೆಗೊಳಿಸುತ್ತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಅಂತಹ ಪ್ರವಾಸಗಳನ್ನು ವಿವಿಧ ಪ್ರವಾಸಿ ಸ್ಥಳಗಳಿಗೆ ½ ದಿನದಿಂದ ಹಿಡಿದು 30 ದಿನಗಳವರೆಗಿನ ಪ್ಯಾಕೇಜು ಟ್ರಿಪ್ಪುಗಳಾಗಿ ನಡೆಸುತ್ತದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಗುಂಪುಗಳಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ವಾಹನಗಳನ್ನು ಗುತ್ತಿಗೆ ಆಧಾರದ ಮೇರೆಗೆ ಒದಗಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ಲಿಂಕ್ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ